Wednesday, November 19, 2008

ಗಾಳಿಪಟ


ಜೀವನ ಒಂದು ಗಾಳಿಪಟ,
ಅವನೇ ಸೂತ್ರಧಾರ .

ಕಷ್ಟ ಸುಖವೆಂಬ ಆಕಾಶ,
ಗಾಳಿಯು ಇಲ್ಲಿ ಆಕಸ್ಮಿಕ,
ಬಾಲಂಗೋಚಿಗೆ ಗುರಿ ಇಲ್ಲ,
ಅವನ ಹಿಡಿತದಲ್ಲಿದೆ ಈ ಬಾಳು...

ಹಾರುವ ಪಟ ನೋಡಲು ಬಲು ಚಂದ,
ಸೂತ್ರ ಮುರಿದ ಪಟಕ್ಕೆ ದಿಕ್ಕೆಲ್ಲಿ,
ಸುಖದ ಜೀವನ ಬಲು ಅಂದ,
ದುಃಖದ ಜೀವನಕೆ ನೆಲೆಯಲ್ಲಿ....

ಅವನ ಆಟಕೆ ನಾನು ಆಡುವೆ,
ತೋರಿದ ದಾರಿಗೆ ನಾನು ನಡೆಯುವೆ,
ಮುಂದೆ ಎಂತೋ ಯಾರು ಅರಿಯರು,
ಪಯಣ ಎಲ್ಲೋ ಯಾರು ತಿಳಿಯರು.....

Tuesday, November 18, 2008

ಚಿಗುರು


ಚಿಗುರು ಬೆಳೆದಿದೆ, ಬಾಳೆಂಬ ಮರದಲಿ,
ಕವಲು ಒಡೆದಿದೆ, ಒಲುಮೆ ಎಂಬ ನದಿಯಲಿ,
ಮನಸ್ಸು ಮುಳುಗಿದೆ, ವಿರಹ ಎಂಬ ಸುಳಿಯಲಿ....

ಈ ಮರಕೆ ಬೇಕು ಬೇರಿನಾಸೆರೆ,
ಈ ಮನಕೆ ಬೇಕು ಒಲವಿನಾಸರೆ,
ಈ ಕಣ್ಣಿಗೆ ಬೇಕು ನಿನ್ನ ಮುಗುಳ್ನಗೆಯಾಸರೆ,
ಈ ಕವಿಗೆ ಬೇಕು ನಿನ್ನ ಸ್ಪೂರ್ತಿಯಾಸರೆ .

ಬಾಳೆಂಬ ಪಥದಲಿ, ಮುಳ್ಳಿದ್ದರೇನು ,
ಪ್ರೇಮ ಯಾತ್ರೆಯಲಿ, ವಿರಹ ಬಂದರೇನು,
ದಾರಿ ಕಾಣುತಿದೆ ನನ್ನ ನಲ್ಲೆಯ ಕಡೆಗೆ,
ಕಾಲ ಸನಿಹವಾಗಿದೆ ಈ ವೇದನೆಗಳ ಅಂತ್ಯಕ್ಕೆ...........

Thursday, November 13, 2008

ನೆನಪು


ಕಣ್ಣ ಮುಂದಿದೆ ಆ ನಿನ್ನ ರೂಪ,
ಕಿವಿಯಲ್ಲಿ ಗುನುಗುತ್ತಿದೆ ಆ ನಿನ್ನ ನಾದ,
ಎದೆಯಲ್ಲಿ ನಲಿಯುತ್ತಿದೆ ಆ ನಿನ್ನ ಪ್ರೇಮ,
ಮತ್ತೆ ಮತ್ತೆ ಕಾಡುತಿದೆ ಆ ನಿನ್ನ ನೆನಪು....

ಚಿಗುರಾಗಿ ಹುಟ್ಟಿದ ಪ್ರೇಮ,
ಬೆಳೆದಿದೆ ಹೆಮ್ಮರವಾಗಿ,
ಮನದಲ್ಲಿ ಆದ ಚಿಲುಮೆ
ಅಪ್ಪಳಿಸಿದೆ ಸುನಾಮಿಯಂತೆ
ಎಂತಹ ಸಂತೋಷ, ಎಂತಹ ನೋವು....

ಎಂದು ಆಗುವುದು ನಿನಗೆ ಪ್ರೇಮ
ಅಂದೇ ನಮ್ಮಿಬರ ಮಿಲನ,
ಎಂದು ಬರುವುದು ಆ ಅಮೃತಘಳಿಗೆ
ಕೂಡಿ ಬಾಳುವೆವು ಮುಂದಿನ ಜೀವನ.....

Monday, October 27, 2008

ಜೀವನ


ಜೀವನ :
ಜೀವನ ಒಂದು ತೂಗುಯ್ಯಾಲೆ
ಹುಟ್ಟು ಸಾವೆಂಬ ಸರಪಳಿಯಲ್ಲಿ.

ಒಮ್ಮೆ ಮೇಲೆ ಒಮ್ಮೆ ಕೆಳಗೆ
ಒಮ್ಮೆ ಸುಖ ಒಮ್ಮೆ ದುಃಖ
ಒಮ್ಮೆ ಗೆಲುವು ಒಮ್ಮೆ ಸೋಲು
ಆದಿ ಅಂತ್ಯಗಳ ನಡುವಿನ ಜೀವನ.

ಆಸೆ - ನಿರಾಸೆ, ಒಲವು - ದ್ವೇಷ,
ಬೇವು - ಬೆಲ್ಲದ ತರಹ ಜೀವನ.

ಉಯ್ಯಾಲೆ ತೂಗುತಿದೆ, ಜೀವನ ಸಾಗುತಿದೆ,
ಕಾಲ ಕಳೆದಂತೆ, ರಭಸವೂ ಬದಲುತ್ತಿದೆ,
ಯಾವ ಕಡೆ ಪಯಣ, ಯಾರು ಬಲ್ಲರು,
ಈ ಜಂಜಾಟಕ್ಕೆ ಮುಕ್ತಿ ಎಂದೋ ಯಾರು ಅರಿಯರು...!!!

Friday, October 17, 2008

ಸ್ಪೂರ್ತಿ




ನನಗೆ ನೀನೆ ಸ್ಪೂರ್ತಿ

ಈ ಪ್ರೇಮಕ್ಕೆ ನೀನೆ ಸ್ಪೂರ್ತಿ,
ಆದರೆ ಈ ವಿರಹಕ್ಕೆ ನೀ ಏಕೆ ಕರಣ....!!!

ಈ ಕವನಕ್ಕೆ ನೀನೆ ಸ್ಪೂರ್ತಿ,
ಆದರೆ ಈ ಗೋಳಿಗೆ ನೀ ಏಕೆ ಕರಣ..!!!

ಈ ಬಾಳಿಗೆ ನೀನೆ ಸ್ಪೂರ್ತಿ,
ಆದರೆ ಈ ವ್ಯಥೆಗೆ ನೀ ಏಕೆ ಕಾರಣ...!!!

ನನ್ನ ಬದುಕಿನ ಸ್ಪೂರ್ತಿಯಾಗು,
ನನ್ನ ಬದುಕನ್ನು ನಂದಿಸಬೇಡ...

Saturday, October 4, 2008

ಮೌನ


ಈ ಮೌನದಲ್ಲೇನಿದೆ, ಇರುವುದೆಲ್ಲ ಬರಿ ಮಾತಿನಲ್ಲಿ
ಈ ವಿರಹದಲ್ಲೇನಿದೆ, ಇರುವುದೆಲ್ಲ ಪ್ರೀತಿಯಲ್ಲಿ.

ಯಾಕಿರುವೆ ಹೀಗೆ, ಮೋಡ ಕವಿದ ಬಾನಿನಂತೆ
ನರಳುತಿರುವೆ ಏಕೆ, ಮಳೆ ಕಾಣದ ಭುವಿಯಂತೆ
ಕಾದಿರುವೆ ಏಕೆ, ಯಾವ ಸಮಯ ಬರುವುದೆಂದು....

ಎದೆಯಲ್ಲಿ ನೋವು, ಮನದಲ್ಲಿ ಕಾತುರ
ತಲೆಯಲ್ಲಿ ಯೋಚನೆ, ದೇಹಕ್ಕೆ ಯಾತನೆ
ಇದು ನೆಮ್ಮದಿ ಕೆಡಿಸಿಹ ಚಿಂತೆಯೋ
ಇಲ್ಲ ಮನಸ್ಸು ಕೊಲ್ಲುತಿಹ ಚಿತೆಯೋ.

ಮೌನ ಬಿಡು ಮಾತನಾಡು,
ಮನಸ್ಸಿನ ಭಾವನೆಗಳ ಹೊರಹಾಕು
ನಲಿ ನಲಿಯುತ,
ಹೊಸ ಜೀವನದ ನಾಂದಿ ಹಾಡು.


ಮಾತೆ ಮುತ್ತು, ಮಾತೆ ಮೃತ್ಯು......

Friday, September 26, 2008

ತಾಯಿ


ಮಮತೆಯ ಭಂಡಾರ ತಾಯಿ,
ವಾತ್ಸಲ್ಯದ ನಿಧಿಯು ತಾಯಿ,
ಸಹನೆಯ ಚಿಲುಮೆ ತಾಯಿ,
ಮಗುವಿನ ಆಧಾರಸ್ತಂಭವೇ ತಾಯಿ.

ಸೂರ್ಯೋದಯ


ನಲಿದಾಡುತ್ತಿದೆ ಹೂವುಗಳು,
ಹಾರುತ್ತಿದೆ ದುಂಬಿಗಳು,
ಕುಣಿದಾದಿವೆ ಬಳ್ಳಿಗಳು,
ಚಿಲಿ ಪಿಲೀ ಎಂದಿದೆ ಪಕ್ಷಿಗಳು.

ಮನೋಹರವಾಗಿದೆ ಸಂಜೆಯು,
ಕೆನ್ನೆ ಕೆಂಪಾಗಿದೆ ಆಕಾಶಗಂಗೆಯಾದು,
ಸುವರ್ಣವಾಗಿದೆ ಭುವಿಯು,
ಅದುವೇ ಸೂರ್ಯನ ಆಗಮನ ಕಾಲವಿದು.

Tuesday, August 19, 2008

ಹುಣ್ಣಿಮೆ ಚಂದ್ರ :




ಮುಸುಕು ಕವಿದಿತ್ತು ರಾತ್ರಿಯಾಗಿತ್ತು
ಸುಂದರ ಸಂಜೆಯ ನಾಂದಿ ಹಾಡಿತ್ತು.

ಒಮ್ಮೆ ನೋಡಿದೆ ನಾನು ಬಾನಕಡೆಗೆ
ರಂಗೋಲಿ ಎಂತಿತ್ತು ನಕ್ಷತ್ರಗಳ ಸಾಲು
ಇದು ನನ್ನ ಕಲ್ಪನೆಯೋ ಸಹಜವೋ
ಈ ವಿಸ್ಮಯವ ನೋಡಿ ನಾ ಬೆರಗಾದೆನು.

ತಂಪಾದ ಗಾಳಿ ಬೀಸಲಾರಂಬಿಸಿತು
ಆ ರಭಸಕ್ಕೆ ಮೋಡಗಳು ದಿಕ್ಕಾಪಾಲಾದವು
ಮೋಡದ ಮರೆ ಇಂದ ಚಂದ್ರ ಇಣುಕಿದನು
ಒಮ್ಮೆಲೇ ಭುವಿಗೆ ಗರ ಬಡಿದಂತಾಯಿತು.

ಪಕ್ಕದಲ್ಲೇ ಇತ್ತು ಸುಂದರ ಕೆರೆ
ನಲಿದಾಡುತಿದ್ದವು ಕಮಲದ ಬಳ್ಳಿಗಳು
ತಂಪಾದ ಗಾಳಿಯು, ಸುಂದರ ಕೆರೆಯು
ಇಂತಹ ಅನುಭವ ನಾ ಹೇಗೆ ಬಣ್ಣಿಸಲಿ.

ಚಂದ್ರನ ನೋಡಿದೆ, ಮೈ ಪುಳಕಗೊಂಡಿತು
ಅಂತಹ ಸೌಂದರ್ಯ ನಾ ಎಲ್ಲೂ ಕಾಣೆನು
ಒಮ್ಮೆ ಮುಟ್ಟಲೂ ಸಿಗನು ಅವನು
ಸಿಗದಿರುವ ವಸ್ತುವಿಗೆ ಆಸೆ ಪಟ್ಟೆ ನಾನು.

ದಿನಗಳು ಕಳೆದವು , ಮತ್ತೆ ನೋಡಿದೆ ನಾನು
ನಕ್ಷತ್ರವು ಇಲ್ಲ, ಚಂದ್ರನು ಇಲ್ಲ
ಎಲ್ಲಿ ನೋಡಿದರಲ್ಲಿ ಕಗತ್ತಲು
ಅಮಾವಾಸ್ಯೆ ಎಂದೂ ಚಂದಿರನ ಕಾಣುವ ತವಕದಲ್ಲಿದೆ ನಾನು....!!!!

Wednesday, August 13, 2008

ಪ್ರೀತಿ



ಪ್ರೀತಿಯೇ ನೀನೊಂದು ಮರೀಚಿಕೆ
ಎಲ್ಲರೂ ನೋಡುವರು , ಆಸೆ ಪಡುವರು
ಬೇಕು ಬೇಕು ಎಂದು ಜಪಿಸುವರು
ಯಾರಿಗೂ ಸಿಗದಂತ ಕಲ್ಪನೆ ನೀನು.

ಕೆಸರಿನಂತೆ ನಿನ್ನ ಗುಣ
ಒಮ್ಮೆ ಬಿದ್ದರೆ ಸಾಕು
ಮುಳುಗಿಸುವೆ ನೀ ಎಲ್ಲರನು
ಶತ ಪ್ರಯತ್ನಿಸಿದರೂ ಹೊರ ದಾರಿ ತೋರದು.

ಕಣ್ಣಿಗೆ ಕಾಣಿಸದ, ಕಿವಿಗೆ ಕೇಳಿಸದ
ಬರೀ ಭಾವನೆಗಳ ಮೆಲುಕು ನೀನು,
ಮನಸ್ಸಿನ ಕದವನ್ನು ತಟ್ಟಿ ತಟ್ಟಿ ಒದೆಯುವೆ
ಮಧುರ ಯಾತನೆಗಳ ಭಂಡಾರ ನೀನು.

ಮಾತುಗಳು ಬರುತಿಲ್ಲ, ಭಾವನೆಗೆ ಮಿತಿ ಇಲ್ಲ
ಇದು ಕಣ್ಣಿರೋ, ಪನ್ನೀರೋ ನಾ ತಿಳಿಯೆನು
ಮನ್ನಸ್ಸು ಕಂಪಿಸಿದೆ, ಹೃದಯ ನಡುಗುತಿದೆ
ಯಾವ ಸಿಡಿಲ ಮಹಿಮೆಯೋ ಕಾಣದಾಗಿದೆ.

ನಿನ್ನ ಅಂಜಿಕೆ ನನಗೆ ಅರಿವಿದೆ
ನಿನ್ನ ಮೇಲೆ ನನಗೆ ನಂಬಿಕೆ ಇದೆ
ಕೈ ಹಿಡಿದು ನಡೆಸುವೆನು ನಾ ನಿನ್ನನು
ಕಳೆಯುವೆ ನಿನ್ನೊಡನೆ ನನ್ನೀ ಉಳಿದ ಬದುಕನ್ನು.

Sunday, August 3, 2008

ಆಸೆ





ನೆಮ್ಮದಿ ಇತ್ತು, ಶಾಂತಿ ಇತ್ತು
ನನ್ನ ಜಗತ್ತಿನಲ್ಲಿ ಲವಲವಿಕೆ ಇತ್ತು
ನಾನೇ ರಾಜನೆಂಬ ಹೆಗ್ಗಳಿಕೆಯೂ ಇತ್ತು.

ಕಂಡೆ ನಾನು ಆ ದೇವಲೋಕದ ಕನ್ಯೆಯನ್ನು
ಆಯಿತು ಅಲ್ಲೋಲ ಕಲ್ಲೋಲ ನನ್ನ ಮನಸಲ್ಲಿ
ಅವಳನ್ನು ಪಡೆಯುವ ಆಸೆ ಹುಟ್ಟಿತು
ಆ ಮರೀಚಿಕೆಯ ದಾರಿ ಹುಡುಕಿ ನಾ ಹೊರಟನು.

ಪ್ರಪಂಚ ಬೇರೆ, ದಾರಿ ಬೇರೆ..!!!!
ಹೇಗೆ ಬೇಟಿ, ಹೇಗೆ ಮಿಲನ...???
ನಾ ಇರುವೆನು ನೀರಿನಲ್ಲಿ, ಅವಳು ಇರುವುದು ದೇವಲೋಕದಲ್ಲಿ.

ಮತ್ತೆ ನೋಡಿದೆ ಅವಳನ್ನು
ಭೇಟಿಯಾಗಲು ನಿರ್ಧರಿಸಿದೆ ಅಂದು
ಬಂದೆ ಹೊರಗೆ ನೀರಿನಿಂದ, ವಿಲ ವಿಲ ಒದ್ದಾಡಿದೆ
ಅವಳು ಸಿಗಲಿಲ್ಲ, ಬದುಕಲು ಆಗುತಿಲ್ಲ.

ಅವಳ ನೆನಪಲ್ಲಿ ಜೀವನ ಸಾಗಿದೆ
ಮುಂದೆ ಎಂತೋ, ಪ್ರಶ್ನೆ ಕಾದಿದೆ
ಯಾರು ತಿಲಿಸುವಿರಿ ನನ್ನ ಈ ವೇದನೆಯನ್ನು
ಬರುವಂತೆ ಮಾಡುವಿರಿ ಅವಳನ್ನು ನನ್ನ ಬಳಿಗೆ...!!!

ಬೇಟಿ ಅನಿರೀಕ್ಷಿತ, ಅಗಲಿಕೆ ಅನಿವಾರ್ಯ, ನೆನಪು ಶಾಶ್ವತ.....

ಮಳೆ ಹನಿ



ಓ ಮಳೆ ಹನಿಯೇ, ಏಕಾಂಗಿಯಾಕಾಗಿರುವೆ
ಎಲ್ಲಿಗೆ ಹೋಗಬೇಕಿದ್ದ ನೀನು ಹೀಗೇಕೆ ನಿಂತಿರುವೆ...!!!

ಏನ ಹೇಳಲಿ ಸೂರ್ಯ, ನನ್ನ ಒಂಟಿತನವನು
ಹೊರಟು ಹೋದರು ಎಲ್ಲರು ನನ್ನನು ಅಗಲಿ
ಬರುವೆವು ಒಟ್ಟಿಗೆ ಹೋಗುವೆವು ಒಟ್ಟಿಗೆ
ಬಾಳಿ ಅಳಿಯುವಾತನಕ ಒಟ್ಟಿಗೆ
ಹೀಗೆಂದುಕೊಂಡು ಮೋಸ ಹೋದೆ.

ಆಕಾಶ ಗಂಗೆ ಇಂದ ಗುಂಪಾಗಿ ಇಳಿದೆವು
ಭೂಸ್ಪರ್ಷಕ್ಕೆ ಕೆಲವರು ಇಂಗಿ ಹೋದರು
ಮತ್ತೆ ಕೆಲವರು ವಾಯುವಿನಲ್ಲಿ ಮೈತ್ರಿಯಾದರು
ಉಳಿದವರು ತಮ್ಮ ಗುರಿಯನ್ನು ಮುಟ್ಟಿದರು

ಅಲ್ಲಿಯೂ ಸಲ್ಲದು ಇಲ್ಲಿಯೂ ಸಲ್ಲದು
ಎಂತಾಗಿದೆ ನನ್ನೀ ಜೀವನ
ಅಳಿಯಲೂ ಆಗದೆ ಬದುಕಲೂ ಆಗದೆ
ಸಾಗುತಿದೆ ಕಾರ್ಪಣ್ಯದ ಜೀವನ

ನನ್ನ ಧ್ಯೇಯವನ್ನು ಮುಟ್ಟುವ ತವಕದಲ್ಲಿ ನಾನು ಹೊರಟನು
ಆದರೆ ಯಾವ ಕಡೆಗೆ ಸಾಗುತಿದೆ ಜೀವನ ನಾ ಅರಿಯೆನು
ಧ್ಯೇಯ ಮೊದಲೋ ಆಸೆ ಮೊದಲೋ ನಾ ತಿಳಿಯೆನು
ಧೈರ್ಯ ತುಂಬಿ ದಾರಿ ತೋರಿ ನೀ ನನ್ನ ನಡಸುವೆಯ...?

ಧ್ಯೇಯ ಇರದ ಪ್ರಾಣಿ ನಾ ಎಲ್ಲೂ ಕಾಣೆನು
ಆಸೆ ಇಂದ ಕೂಡಿದ ಧ್ಯೇಯ ಬದುಕಿನ ಕಾರಣ
ನುಗ್ಗಿ ಮುಂದೆ ಸಾದಿಸು ಧ್ಯೇಯವನ್ನು
ನಾ ಇರುವೆ ನಿನ್ನ ಹಿಂದೆ, ಇದನು ನೀ ಅರಿತುಕೋ...!!!!

Tuesday, July 1, 2008

poem 3


ಮತ್ತೆ ಕಾಡುತಿದೆ ಆ ನಿನ್ನ ರೂಪವು
ಬಣ್ಣಿಸಲಾಗದಂತ ನಿನ್ನ ಮುಗ್ಧತೆಯು
ಬಾ ಬಾ ಎಂದು ಕರೆಯುತಿದೆ ಆ ನಿನ್ನ ಕಣ್ಣುಗಳು
ಯಾರನೋ ಅಪೇಕ್ಷಿಸಿದಂತಿದೆ ನಿನ್ನ ಭಾವನೆಗಳು.

ಚಂದ್ರನೂ ನಾಚಿಹುನು ನಿನ್ನ ಮುಗುಳ್ನಗೆ ಇಂದ
ಇಂತಹ ಕಾಂತಿಯನ್ನು ಕಂಡಿರಲಿಲ್ಲನೆಂದ
ಯಾವ ನಗರದ ಸುಂದರಿಯೋ ನೀನು,
ನಿನ್ನ ಮುಂದೆ ನಾನು ತೃಣಕ್ಕೆ ಸಮನೆಂದ.

ಅಂದು ಕಂಡೆ ನಾನು ನಿನ್ನನು
ಮುಸುಕು ಕವಿದಿತ್ತು, ಚಂದ್ರಮನ ಆಗಮನವಾಗಿತ್ತು
ಬೆಳದಿಂಗಳ ಬಾಲೆ ಅಂತೆ ಇದ್ದ ನಿನ್ನನು.

ನಾನು ಬರಲು ನಿನ್ನ ಬಳಿಗೆ,ಮಾತು ಬರದೆ ಹೋಯಿತು
ಏನು ಕೇಳಲಿ, ಏನು ಹೇಳಲಿ ಎಂದು ತಿಳಿಯದಾದೆನು,
ಅಷ್ಟರಲ್ಲಿ ನಿದ್ದೆ ಇಂದ ನಾನು ಎಚ್ಹೆತ್ತುಕೊಂಡೆನು.

ನಿನ್ನ ರೂಪ ನಿನ್ನ ಭಾವ ಹೇಗೆ ನಾನು ಬಣ್ಣಿಸಲಿ
ಒಂದು ಕ್ಷಣದಲ್ಲಿ ಆದ ಪ್ರೀತಿ ನಾ ಹೇಗೆ ಮರೆಯಲಿ
ಮತ್ತೆ ಕನಸು ಬರುವುದೆಂದು ನಾ ದಿನ ಮಲಗುವೆ
ಬಂದು ಕಾಡಿ ನೀನು ನನ್ನ ಕಣ್ಮರೆಯಗುತಿರುವೆ.


ಕವಿತೆಯ ಹೆಸರು " ನನ್ನ ಕನಸು"

----- ಪ್ರದೀಪ್ ಬಿ ಕೆ

Wednesday, May 7, 2008

poem2

ಏನ ವಿವರಿಸಲಿ ನಿನ್ನ ರೂಪವನ್ನ
ಆ ನಿನ್ನ ನಯನ ಮನೋಹರ ಚಲುವನ್ನ
ಕಣ್ಣಿಗೆ ಕಟ್ಟಿದಂತಿರುವ ಸೋಬಗನ್ನ.

ಮಳೆಯ ಹನಿಗಳಿಂದಾಗಿರುವ ಮುತ್ತಿನ ಹಾರವು
ನಿನ್ನ ಕೊರಳಿನಲ್ಲಿ ಮಿನುಗುತಿದೆ ಪಳ ಪಳ ಎಂದು
ಹಚ್ಚ ಹಸಿರಿನಿಂದ ಕೂಡಿದ ಈ ಪುಷ್ಪ ವೃಕ್ಷಗಳು
ಹಸಿರಿನ ವಸ್ತ್ರದಂತೆ ಥಳಥಳಿಸುತಿದೆ ನಿನ್ನ ಮೈಯನ್ನು.

ಕೆಂಬಣ್ಣದಂತಿರುವ ನಿನ್ನ ಕೆನ್ನೆಯು
ಬಾಚಿಕರೆಯುತಿದೆ ಸೂರ್ಯನನ್ನು
ಮಿಂಚಿನಂತಿರುವ ನಿನ್ನ ಕಣ್ಣುಗಳು
ಬಾ ಬಾ ಎಂದು ಕರೆಯುತಿದೆ ಚಂದ್ರನನ್ನು.

ಏನ ವಿವರಿಸಲಿ ನಿನ್ನ ರೂಪವನ್ನು
ಅದೇ ನನ್ನ ಊರಿನ ಸೊಬಗನ್ನು
ಮಲೆನಾಡ ತಪ್ಪಲಿನ ಮಹಾನಗರಿಯನ್ನು
ಇದುವೀ ಹಾಸನಾಂಬೆ ನೆಲೆಸಿರುವ "ಹಾಸನ"ವನ್ನು.
---- ಪ್ರದೀಪ್ ಬಿ ಕೆ

poem 1



ನಾ ನಿನ್ನ ಕಂಡೊಡನೆ ನನ್ನೇ ನಾ ಮರೆತೆನು
ಅಂದಿನಿಂದ ಇಲ್ಲಿಯವರೆಗೆ, ನಿನ್ನ ನೆನಪಲ್ಲೇ ನೆನೆದೆನು
ಏನಾಯಿತು, ಯಾಕಾಯಿತು ನಾ ತಿಲಿಯೆನು
ನಿನ್ನ ನಾಮ ಸ್ಮರಣೆ ಹೊರೆತು, ನಾ ಏನು ಬಲ್ಲೆನು.

ಆ ನಿನ್ನ ಮುಗುಳ್ನಗೆಯನ್ನು ನೋಡಲು ಹಾತೋರೆಯುತಿರುವೆನು
ಆ ನಿನ್ನ ಮಧುರ ಕಂಥಲೋಪನೆಗೆ ಕಾತೊರೆಯುತಿರುಹೆನು
ಒಂದು ಬಾರಿ ಪ್ರೀತಿ ತೋರಿ, ಪಾವನನಾಗಿಸು ನನ್ನನು
ಬೇಗ ಬಂದು ಬಿಡಿಸು ನನ್ನ, ಮುಕ್ತಿಗೊಳಿಸು ಈ ಒಂಟಿ ಬಂಧನವನು.

ನನ್ನ ಈ ತವಕವನ್ನು ನಿನಗೆ ಹೇಗೆ ತಿಳಿಸಲಿ
ಈ ವಿರಹದ ಬೇಗೆಯಲ್ಲಿ ನಾ ಹೇಗೆ ಉಳಿಯಲಿ
ಬದುಕಲು ಬಿಡದೆ, ನರಳಲು ಬಿಡದೆ, ಈ ಪ್ರೇಮ ಬಲೆಗೆ ನಾ ಸಿಲುಕಿಹೆನು.

ನಿನ್ನ ನೋಡೋ ತವಕದಲ್ಲಿ ನಾ ಹುಚ್ಚನಾದೆನು
ಪೂರ್ಣಚಂದ್ರನನ್ನು ನೋಡಿ ನಾ ತೃಪ್ತನಾದೇನು
ನಿನದೆ ದೀಪ, ನಿನದೆ ಬಿಂಬ ಚಂದ್ರನಲ್ಲಿ ಕಂಡೆನು
ಆದರು ಏನೋ ಪಡೆದು,ಏನೋ ಕಳೆದ ಅನುಭವ ಪಡೆದೆನು.

ನನ್ನ ಮನದ ದುಗುಡವನ್ನು ಬೇಗ ಅರ್ಥಮಾಡಿಕೋ
ಒಲ್ಲೇ ಎನದೆ, ಬೇಗ ನನ್ನ ಒಪ್ಪಿಕೊ
ಬಂದು ಸೇರು ನನ್ನ ಬಳಿಗೆ ಎಂದು ನಾ ಹೇಳುವೆ
ಜಿಂಕೆಯಂತೆ ಓಡಿ ಬಂದು ನನ್ನ ನೀ ಪ್ರೇಮಿಸು.

ಪ್ರದೀಪ್ ಬಿ ಕೆ