Wednesday, May 7, 2008

poem2

ಏನ ವಿವರಿಸಲಿ ನಿನ್ನ ರೂಪವನ್ನ
ಆ ನಿನ್ನ ನಯನ ಮನೋಹರ ಚಲುವನ್ನ
ಕಣ್ಣಿಗೆ ಕಟ್ಟಿದಂತಿರುವ ಸೋಬಗನ್ನ.

ಮಳೆಯ ಹನಿಗಳಿಂದಾಗಿರುವ ಮುತ್ತಿನ ಹಾರವು
ನಿನ್ನ ಕೊರಳಿನಲ್ಲಿ ಮಿನುಗುತಿದೆ ಪಳ ಪಳ ಎಂದು
ಹಚ್ಚ ಹಸಿರಿನಿಂದ ಕೂಡಿದ ಈ ಪುಷ್ಪ ವೃಕ್ಷಗಳು
ಹಸಿರಿನ ವಸ್ತ್ರದಂತೆ ಥಳಥಳಿಸುತಿದೆ ನಿನ್ನ ಮೈಯನ್ನು.

ಕೆಂಬಣ್ಣದಂತಿರುವ ನಿನ್ನ ಕೆನ್ನೆಯು
ಬಾಚಿಕರೆಯುತಿದೆ ಸೂರ್ಯನನ್ನು
ಮಿಂಚಿನಂತಿರುವ ನಿನ್ನ ಕಣ್ಣುಗಳು
ಬಾ ಬಾ ಎಂದು ಕರೆಯುತಿದೆ ಚಂದ್ರನನ್ನು.

ಏನ ವಿವರಿಸಲಿ ನಿನ್ನ ರೂಪವನ್ನು
ಅದೇ ನನ್ನ ಊರಿನ ಸೊಬಗನ್ನು
ಮಲೆನಾಡ ತಪ್ಪಲಿನ ಮಹಾನಗರಿಯನ್ನು
ಇದುವೀ ಹಾಸನಾಂಬೆ ನೆಲೆಸಿರುವ "ಹಾಸನ"ವನ್ನು.
---- ಪ್ರದೀಪ್ ಬಿ ಕೆ