Monday, August 3, 2009

ಮೊದಲ ಭೇಟಿ


ಆ ಮೊದಲ ಭೇಟಿಯು ಬಲು ರೋಮಾಂಚಕ,
ಆ ಪ್ರೀತಿಯ ನೋಟವು ಅತಿ ಆಕರ್ಷಕ,
ಆ ಮೊದಲ ಸ್ಪರ್ಶವು ಮನಮೋಹಕ,
ಆ ಕಂಠದ ಮಾತುಗಳು ನಾದಮಯ...!!!

ಆ ತುಂತುರು ಮಳೆಯಲ್ಲಿ,
ಒಂಟಿ ಕೊಡೆಯ ಆಶ್ರಯದಲ್ಲಿ,
ಹೃದಯಗಳ ಪರಿಭಾಷೆಯಲ್ಲಿ,
ಕಣ್ಣಂಚಿನ ನೋಟಗಳಲ್ಲಿ,
ಸಾಗುತಿದೆ ಈ ಪಯಣ, ನಲ್ಲ-ನಲ್ಲೆಯ ಪ್ರೀತಿಯ ದಿಬ್ಬಣ.

ಕಣ್ಣಲ್ಲಿ ನಲಿದಾದುತ್ತಿದೆ ನಿನ್ನ ರೂಪವು,
ಮನದಲ್ಲಿ ಆವರಿಸಿದೆ ನಿನ್ನ ವಿರಹವು,
ಕಿವಿಯಲ್ಲಿ ಗುನುಗುತಿದೆ ನಿನ್ನ ನಾದವು,
ನಿನ್ನ ನೋಡಬೇಕೆನ್ನುತಿದೆ ಈ ನನ್ನ ಹೃದಯವು...

ನನ್ನ ನಿನ್ನ ಮಿಲನದಲಿ,
ನೆನ್ನೆ ನಾಳೆಗಳ ಬುನಾದಿಯಲಿ,
ತಂದೆ ತಾಯಿಗಳ ಆಶಿರ್ವಾದದಲ್ಲಿ,
ನಮ್ಮ ಜೀವನ ಸಾಗಿದೆ.

ಮೊದಲ ಭೇಟಿ ಸುಂದರ,
ಆದರೆ ಹೃದಯಗಳ ಮಾತು ಮಧುರ,
ನನ್ನ ನಿನ್ನ ಪ್ರೀತಿ ಸುಂದರ,
ಆದರೆ ನಮ್ಮ ಭಾಂಧವ್ಯ ನಿರಂತರ.

Wednesday, May 13, 2009

ನನ್ನ ನಲ್ಲ


ನಾ ಸುಂದರಿ ಆದರೆ ನನ್ನ ನಲ್ಲ ಬಲು ಸುಂದರ,
ಅವನ ಸರಿಸಾಟಿ ಯಾರಿಲ್ಲ, ಅವನ ಪ್ರೀತಿಗೆ ಬೆಲೆಕಟ್ಟುವಂತಿಲ್ಲ.

ಕಾದಿರುವೆ ನಾನು ನನ್ನ ನಲ್ಲನ ಬರುವಿಕೆಗೆ,
ಮುಳುಗಿರುವೆ ನಾನು ನನ್ನ ನಲ್ಲನ ನೆನಪಿನಲ್ಲಿ,
ಅಪೇಕ್ಷಿಸಿರುವೆ ನಾನು ನನ್ನ ನಲ್ಲನ ಮುಖ ದರ್ಶನಕೆ,
ನೊಂದಿರುವೆ ನಾನು ನನ್ನ ನಲ್ಲನ ವಿರಹದಲ್ಲಿ..!!!

ನಿನ್ನ ಬರುವಿಕೆಗೆ ನಾ ಕಾದಿಹೆನು,
ನಿನ್ನ ತಬ್ಬಿ ನಿಲ್ಲಲು ನಾ ಹಾತೊರೆಯುತಿಹೆನು,
ನಿನ್ನ ಸ್ವರವ ಕೇಳಲು ನಾ ಕಾದಿಹೆನು,
ನಿನ್ನ ಪ್ರೀತಿಯನ್ನು ಕಾಣಲು ಪರಿತಪ್ಪಿಸುತಿಹೇನು.

ಓ ನನ್ನ ನಲ್ಲ,
ಈ ವಿರಹದ ಸುಳಿಯಲ್ಲಿ ಬೇಗುತಿಹೇನು,
ಈ ಪ್ರೀತಿಯ ಬಲೆಗೆ ನಾ ಸಿಲುಕಿಹೆನು.

ನನ್ನ ಮನ ಕಂಪಿಸಿದೆ,
ನನ್ನ ಕಾತುರ ಹೆಚ್ಚಾಗಿದೆ,
ನನ್ನ ಆಸೆ ಮಿತಿಮೀರಿದೆ,
ನಿನ್ನ ಸೇರುವ ತವಕ ನನಗಿದೆ....

Tuesday, April 28, 2009

ನನ್ನವಳು....



ನನ್ನ ಮನದಲ್ಲಿ ನಲಿಯುತಿರುವ ನವಿಲೇ,
ನನ್ನ ಕಿವಿಗಳಿಗೆ ಇಂಪು ನೀಡುವ ಕೋಗಿಲೆಯೇ,
ನನ್ನ ಕಣ್ಣನ್ನು ತಂಪಿಸುವ ದೇವಕನ್ಯೆಯೇ ,
ನೀ ಎಲ್ಲಿರುವೆ, ನನ್ನ ಏಕೆ ಕಾಡುತಿರುವೆ.

ನನ್ನ ಉಸಿರಲ್ಲಿ ಬೆರೆತಿಹ ಕನ್ಯೆಯೇ,
ನನ್ನ ಹೃದಯ ಕದ್ದಿರುವ ಕಳ್ಳಿಯೇ,
ನನ್ನ ಮನವ ಆವರಿಸಿಹ ಚಲುವೆಯೇ,
ಇವೆಲಕ್ಕೂ ಮೀರಿ ನೀ ನನ್ನ ಪ್ರಾಣವೇ...

ಹುಣ್ಣಿಮೆಯ ಚಂದಿರ ಚನ್ನ,
ಆ ನಿನ್ನ ಮುಗುಳ್ನಗೆಯು ಚನ್ನ,
ದೀಪದ ಬೆಳಕು ಚನ್ನ,
ಆ ನಿನ್ನ ಕಣ್ಣುಗಳು ಚನ್ನ.

ನಿನ್ನ ಕಾಣುವ ತವಕ ನನ್ನಲ್ಲಿದೆ,
ನಿನ್ನ ಬಾಚಿ ತಬ್ಬುವ ಆಸೆ ನನಗಿದೆ,
ನಿನ್ನ ಮನ್ನಸ್ಸು ಸೇರುವ ತವಕ ನನ್ನಲ್ಲಿದೆ,
ನಿನ್ನ 'ಪತಿ'ಯಾಗುವ ಮಹಾದಾಸೆ ನನಗಿದೆ.

ಪೂರ್ಣಿಮಾ ಇಲ್ಲದೆ 'ಪ್ರ'ದೀಪನಿಲ್ಲ
ದೀಪವಿಲ್ಲದ ಚಂದಿರಗೆ ಕಾಂತಿಇಲ್ಲ.

Tuesday, February 24, 2009

ಬಾಲ್ಯದ ನೆನಪು...


ನೆನಪುಗಳು ಅತಿ ಮಧುರ
ಅದರ ಸಜೆ ಬಹು ಕಠಿಣ...

ಕಣ್ಣ ತುಂಬಿದೆ ಆ ನೆನಪುಗಳು,
ಮನದಲ್ಲಿ ಚಿಮ್ಮುತಿದೆ ಸಂತಸದ ಅಲೆಗಳು,
ಕಳೆದು ಹೋಗಿದೆ ಆ ದಿನಗಳು,
ಕುಣಿದು ಕುಪ್ಪಳಿಸಿದ ಮಧುರ ಕ್ಷಣಗಳು.

ಬಯಲೇ ಮನೆಯಾಗಿದ್ದ ಬೇಸಿಗೆ ರಜಗಳು,
ಮೈಸೂರ ಸೊಬಗ ಕಂಡ ದಸರಾ ರಜೆಗಳು,
ಬೇಸಿಗೆಯಲ್ಲಿ ಕುಡಿದ ನಿಂಬೆ ಪಾನಕಗಳು,
ವಸ್ತು ಪ್ರದರ್ಶನದ ಕಾಟನ್ ಕ್ಯಾಂಡಿಗಳು,
ಕಣ್ಣ ಮುಂದಿದೆ ಆ ನೆನಪುಗಳು,
ಮರೆಯಲಾಗದಂತಹ ಸವಿ ಅನುಭವಗಳು.

ಆ ದಿನಗಳ ಕಾಣುವ ತವಕ ನನ್ನದು,
ಆ ಸವಿಯ ಅನುಭವಿಸುವ ಆತುರ ನನ್ನದು,
ಮತ್ತೆ ಪಡೆಯಬೇಕು ಆ ಬಾಲ್ಯವನ್ನು,
ಮಗುವಾಗಿ ಮಲಗಬೇಕು ಅಮ್ಮನ ಮಡಿಲ್ಲಲ್ಲಿ....

Friday, January 30, 2009

ನನ್ನಲ್ಲಿ ನೀನು


ನಾನು, ನೀನು..? ಈ ಪ್ರಶ್ನೆಗೆ ಉತ್ತರವೇನು...

ನನ್ನ ಕಲ್ಪನೆಯ ಶಿಲೆಯು ನೀನು,
ನನ್ನ ಕಣ್ಣಿನ ದೃಷ್ಟಿಯು ನೀನು,
ನನ್ನ ಮಾತಿನ ಧಾಟಿಯೂ ನೀನು,
ನನ್ನ ಯೋಚನೆಗಳ ಭಂಡಾರ ನೀನು,
ನನ್ನ ಉಸಿರಿನ ತ್ರಾಣ ನೀನು,
ನನ್ನ ಹೃದಯಾಲಯದ ದೇವತೆ ನೀನು,
ನನ್ನ ಬದುಕಿಗೆ ಅರ್ಥ ನೀನು.

ನಾನು ನೀನು ಎಂದೂ ಬೇರೆಯಲ್ಲ,
ನಮ್ಮ ಈ ವಿರಹಕ್ಕೆ ಅರ್ಥವಿಲ್ಲ.
ಬೇರೆಯಂತಿರುವುದು ಈ ದೇಹವು,
ಒಂದೇ ಜೀವದಂತಿರುವುದು ನಮ್ಮ ಮನವು.

ನಾನು.. ನೀನು.. ಉತ್ತರ ಇಲ್ಲಿದೆ...
ನನ್ನ ಮನದಲ್ಲಿ ನೀನು, ನಿನ್ನ ಮನದಲ್ಲಿ ನಾನು..
ಪ್ರಶ್ನೆ ಕಠಿಣ, ಆದರೆ ಉತ್ತರ ಬಲು ಸುಲಭ.

Monday, January 5, 2009

ಹೊಸ ವರ್ಷ


ದಿನಗಳೆಂಬುದು ಪಂಚಾಂಗದಲ್ಲಿ ಬರೆದ ದಿನಗಳಲ್ಲ,
ವರ್ಷವೆಂಬುದು ಕಳೆದ ಹೋದ ಸಂವತ್ಸರವಲ್ಲ,
ಆಸೆಗೆ ತಕ್ಕಂತೆ ಛಲವನ್ನು ತರುವುದೇ ದಿನಗಳು,
ಮಾನವನಿಗೆ ಮೌಲ್ಯಗಳನ್ನು ತುಂಬುವುದೇ ವರ್ಷಗಳು.

ದಿನ ಕಳೆಯಿತು, ಹೊಸತನ ಹರಿಯಿತು,
ಹಳೆಯ - ಹೊಸತನದ ದೊಂಬಿಯಾಯಿತು,
ಹೊಸತು ಸರಿಯೋ, ಹಳತು ಸರಿಯೋ,
ಇದೆರದರ ನಡುವೆ ಮನಸ್ಸಿನಲ್ಲಿ ಕಾಳಗವಾಯಿತು.

ಹಳೆಯ ಅನುಭವ ಬೇಕು,
ಹೊಸ ಸ್ಪರ್ದೆಯೂ ಬೇಕು,
ಹಳೆಯ ಚೈತನ್ಯ ಬೇಕು,
ಹೊಸ ಗುರಿಯು ಬೇಕು.

ನೆನ್ನೆ - ನಾಳೆಗಳ ನಡುವಿನಲಿ,
ಎಳು - ಬೀಳುಗಳ ಜೊತೆಯಲಿ,
ಬೇವು - ಬೆಲ್ಲಗಳ ರುಚಿಯಲಿ,
ನೋವು - ನಲಿವುಗಳ ಮಧ್ಯದಲ್ಲಿ.... ಸಾಗುತಿದೆ ಈ ಜೀವನ.

ಜೀವನ ಸಾಗಲಿ, ಹೊಸತನ ಪಡೆಯಲಿ,
ಎಲ್ಲದಕ್ಕೂ ಮೀರಿ ನೆಮ್ಮದಿಯ ನೆಲೆ ದೊರಕಲಿ...

Wednesday, November 19, 2008

ಗಾಳಿಪಟ


ಜೀವನ ಒಂದು ಗಾಳಿಪಟ,
ಅವನೇ ಸೂತ್ರಧಾರ .

ಕಷ್ಟ ಸುಖವೆಂಬ ಆಕಾಶ,
ಗಾಳಿಯು ಇಲ್ಲಿ ಆಕಸ್ಮಿಕ,
ಬಾಲಂಗೋಚಿಗೆ ಗುರಿ ಇಲ್ಲ,
ಅವನ ಹಿಡಿತದಲ್ಲಿದೆ ಈ ಬಾಳು...

ಹಾರುವ ಪಟ ನೋಡಲು ಬಲು ಚಂದ,
ಸೂತ್ರ ಮುರಿದ ಪಟಕ್ಕೆ ದಿಕ್ಕೆಲ್ಲಿ,
ಸುಖದ ಜೀವನ ಬಲು ಅಂದ,
ದುಃಖದ ಜೀವನಕೆ ನೆಲೆಯಲ್ಲಿ....

ಅವನ ಆಟಕೆ ನಾನು ಆಡುವೆ,
ತೋರಿದ ದಾರಿಗೆ ನಾನು ನಡೆಯುವೆ,
ಮುಂದೆ ಎಂತೋ ಯಾರು ಅರಿಯರು,
ಪಯಣ ಎಲ್ಲೋ ಯಾರು ತಿಳಿಯರು.....