Sunday, August 3, 2008

ಮಳೆ ಹನಿ



ಓ ಮಳೆ ಹನಿಯೇ, ಏಕಾಂಗಿಯಾಕಾಗಿರುವೆ
ಎಲ್ಲಿಗೆ ಹೋಗಬೇಕಿದ್ದ ನೀನು ಹೀಗೇಕೆ ನಿಂತಿರುವೆ...!!!

ಏನ ಹೇಳಲಿ ಸೂರ್ಯ, ನನ್ನ ಒಂಟಿತನವನು
ಹೊರಟು ಹೋದರು ಎಲ್ಲರು ನನ್ನನು ಅಗಲಿ
ಬರುವೆವು ಒಟ್ಟಿಗೆ ಹೋಗುವೆವು ಒಟ್ಟಿಗೆ
ಬಾಳಿ ಅಳಿಯುವಾತನಕ ಒಟ್ಟಿಗೆ
ಹೀಗೆಂದುಕೊಂಡು ಮೋಸ ಹೋದೆ.

ಆಕಾಶ ಗಂಗೆ ಇಂದ ಗುಂಪಾಗಿ ಇಳಿದೆವು
ಭೂಸ್ಪರ್ಷಕ್ಕೆ ಕೆಲವರು ಇಂಗಿ ಹೋದರು
ಮತ್ತೆ ಕೆಲವರು ವಾಯುವಿನಲ್ಲಿ ಮೈತ್ರಿಯಾದರು
ಉಳಿದವರು ತಮ್ಮ ಗುರಿಯನ್ನು ಮುಟ್ಟಿದರು

ಅಲ್ಲಿಯೂ ಸಲ್ಲದು ಇಲ್ಲಿಯೂ ಸಲ್ಲದು
ಎಂತಾಗಿದೆ ನನ್ನೀ ಜೀವನ
ಅಳಿಯಲೂ ಆಗದೆ ಬದುಕಲೂ ಆಗದೆ
ಸಾಗುತಿದೆ ಕಾರ್ಪಣ್ಯದ ಜೀವನ

ನನ್ನ ಧ್ಯೇಯವನ್ನು ಮುಟ್ಟುವ ತವಕದಲ್ಲಿ ನಾನು ಹೊರಟನು
ಆದರೆ ಯಾವ ಕಡೆಗೆ ಸಾಗುತಿದೆ ಜೀವನ ನಾ ಅರಿಯೆನು
ಧ್ಯೇಯ ಮೊದಲೋ ಆಸೆ ಮೊದಲೋ ನಾ ತಿಳಿಯೆನು
ಧೈರ್ಯ ತುಂಬಿ ದಾರಿ ತೋರಿ ನೀ ನನ್ನ ನಡಸುವೆಯ...?

ಧ್ಯೇಯ ಇರದ ಪ್ರಾಣಿ ನಾ ಎಲ್ಲೂ ಕಾಣೆನು
ಆಸೆ ಇಂದ ಕೂಡಿದ ಧ್ಯೇಯ ಬದುಕಿನ ಕಾರಣ
ನುಗ್ಗಿ ಮುಂದೆ ಸಾದಿಸು ಧ್ಯೇಯವನ್ನು
ನಾ ಇರುವೆ ನಿನ್ನ ಹಿಂದೆ, ಇದನು ನೀ ಅರಿತುಕೋ...!!!!