Tuesday, August 19, 2008

ಹುಣ್ಣಿಮೆ ಚಂದ್ರ :




ಮುಸುಕು ಕವಿದಿತ್ತು ರಾತ್ರಿಯಾಗಿತ್ತು
ಸುಂದರ ಸಂಜೆಯ ನಾಂದಿ ಹಾಡಿತ್ತು.

ಒಮ್ಮೆ ನೋಡಿದೆ ನಾನು ಬಾನಕಡೆಗೆ
ರಂಗೋಲಿ ಎಂತಿತ್ತು ನಕ್ಷತ್ರಗಳ ಸಾಲು
ಇದು ನನ್ನ ಕಲ್ಪನೆಯೋ ಸಹಜವೋ
ಈ ವಿಸ್ಮಯವ ನೋಡಿ ನಾ ಬೆರಗಾದೆನು.

ತಂಪಾದ ಗಾಳಿ ಬೀಸಲಾರಂಬಿಸಿತು
ಆ ರಭಸಕ್ಕೆ ಮೋಡಗಳು ದಿಕ್ಕಾಪಾಲಾದವು
ಮೋಡದ ಮರೆ ಇಂದ ಚಂದ್ರ ಇಣುಕಿದನು
ಒಮ್ಮೆಲೇ ಭುವಿಗೆ ಗರ ಬಡಿದಂತಾಯಿತು.

ಪಕ್ಕದಲ್ಲೇ ಇತ್ತು ಸುಂದರ ಕೆರೆ
ನಲಿದಾಡುತಿದ್ದವು ಕಮಲದ ಬಳ್ಳಿಗಳು
ತಂಪಾದ ಗಾಳಿಯು, ಸುಂದರ ಕೆರೆಯು
ಇಂತಹ ಅನುಭವ ನಾ ಹೇಗೆ ಬಣ್ಣಿಸಲಿ.

ಚಂದ್ರನ ನೋಡಿದೆ, ಮೈ ಪುಳಕಗೊಂಡಿತು
ಅಂತಹ ಸೌಂದರ್ಯ ನಾ ಎಲ್ಲೂ ಕಾಣೆನು
ಒಮ್ಮೆ ಮುಟ್ಟಲೂ ಸಿಗನು ಅವನು
ಸಿಗದಿರುವ ವಸ್ತುವಿಗೆ ಆಸೆ ಪಟ್ಟೆ ನಾನು.

ದಿನಗಳು ಕಳೆದವು , ಮತ್ತೆ ನೋಡಿದೆ ನಾನು
ನಕ್ಷತ್ರವು ಇಲ್ಲ, ಚಂದ್ರನು ಇಲ್ಲ
ಎಲ್ಲಿ ನೋಡಿದರಲ್ಲಿ ಕಗತ್ತಲು
ಅಮಾವಾಸ್ಯೆ ಎಂದೂ ಚಂದಿರನ ಕಾಣುವ ತವಕದಲ್ಲಿದೆ ನಾನು....!!!!