Tuesday, August 19, 2008

ಹುಣ್ಣಿಮೆ ಚಂದ್ರ :




ಮುಸುಕು ಕವಿದಿತ್ತು ರಾತ್ರಿಯಾಗಿತ್ತು
ಸುಂದರ ಸಂಜೆಯ ನಾಂದಿ ಹಾಡಿತ್ತು.

ಒಮ್ಮೆ ನೋಡಿದೆ ನಾನು ಬಾನಕಡೆಗೆ
ರಂಗೋಲಿ ಎಂತಿತ್ತು ನಕ್ಷತ್ರಗಳ ಸಾಲು
ಇದು ನನ್ನ ಕಲ್ಪನೆಯೋ ಸಹಜವೋ
ಈ ವಿಸ್ಮಯವ ನೋಡಿ ನಾ ಬೆರಗಾದೆನು.

ತಂಪಾದ ಗಾಳಿ ಬೀಸಲಾರಂಬಿಸಿತು
ಆ ರಭಸಕ್ಕೆ ಮೋಡಗಳು ದಿಕ್ಕಾಪಾಲಾದವು
ಮೋಡದ ಮರೆ ಇಂದ ಚಂದ್ರ ಇಣುಕಿದನು
ಒಮ್ಮೆಲೇ ಭುವಿಗೆ ಗರ ಬಡಿದಂತಾಯಿತು.

ಪಕ್ಕದಲ್ಲೇ ಇತ್ತು ಸುಂದರ ಕೆರೆ
ನಲಿದಾಡುತಿದ್ದವು ಕಮಲದ ಬಳ್ಳಿಗಳು
ತಂಪಾದ ಗಾಳಿಯು, ಸುಂದರ ಕೆರೆಯು
ಇಂತಹ ಅನುಭವ ನಾ ಹೇಗೆ ಬಣ್ಣಿಸಲಿ.

ಚಂದ್ರನ ನೋಡಿದೆ, ಮೈ ಪುಳಕಗೊಂಡಿತು
ಅಂತಹ ಸೌಂದರ್ಯ ನಾ ಎಲ್ಲೂ ಕಾಣೆನು
ಒಮ್ಮೆ ಮುಟ್ಟಲೂ ಸಿಗನು ಅವನು
ಸಿಗದಿರುವ ವಸ್ತುವಿಗೆ ಆಸೆ ಪಟ್ಟೆ ನಾನು.

ದಿನಗಳು ಕಳೆದವು , ಮತ್ತೆ ನೋಡಿದೆ ನಾನು
ನಕ್ಷತ್ರವು ಇಲ್ಲ, ಚಂದ್ರನು ಇಲ್ಲ
ಎಲ್ಲಿ ನೋಡಿದರಲ್ಲಿ ಕಗತ್ತಲು
ಅಮಾವಾಸ್ಯೆ ಎಂದೂ ಚಂದಿರನ ಕಾಣುವ ತವಕದಲ್ಲಿದೆ ನಾನು....!!!!

Wednesday, August 13, 2008

ಪ್ರೀತಿ



ಪ್ರೀತಿಯೇ ನೀನೊಂದು ಮರೀಚಿಕೆ
ಎಲ್ಲರೂ ನೋಡುವರು , ಆಸೆ ಪಡುವರು
ಬೇಕು ಬೇಕು ಎಂದು ಜಪಿಸುವರು
ಯಾರಿಗೂ ಸಿಗದಂತ ಕಲ್ಪನೆ ನೀನು.

ಕೆಸರಿನಂತೆ ನಿನ್ನ ಗುಣ
ಒಮ್ಮೆ ಬಿದ್ದರೆ ಸಾಕು
ಮುಳುಗಿಸುವೆ ನೀ ಎಲ್ಲರನು
ಶತ ಪ್ರಯತ್ನಿಸಿದರೂ ಹೊರ ದಾರಿ ತೋರದು.

ಕಣ್ಣಿಗೆ ಕಾಣಿಸದ, ಕಿವಿಗೆ ಕೇಳಿಸದ
ಬರೀ ಭಾವನೆಗಳ ಮೆಲುಕು ನೀನು,
ಮನಸ್ಸಿನ ಕದವನ್ನು ತಟ್ಟಿ ತಟ್ಟಿ ಒದೆಯುವೆ
ಮಧುರ ಯಾತನೆಗಳ ಭಂಡಾರ ನೀನು.

ಮಾತುಗಳು ಬರುತಿಲ್ಲ, ಭಾವನೆಗೆ ಮಿತಿ ಇಲ್ಲ
ಇದು ಕಣ್ಣಿರೋ, ಪನ್ನೀರೋ ನಾ ತಿಳಿಯೆನು
ಮನ್ನಸ್ಸು ಕಂಪಿಸಿದೆ, ಹೃದಯ ನಡುಗುತಿದೆ
ಯಾವ ಸಿಡಿಲ ಮಹಿಮೆಯೋ ಕಾಣದಾಗಿದೆ.

ನಿನ್ನ ಅಂಜಿಕೆ ನನಗೆ ಅರಿವಿದೆ
ನಿನ್ನ ಮೇಲೆ ನನಗೆ ನಂಬಿಕೆ ಇದೆ
ಕೈ ಹಿಡಿದು ನಡೆಸುವೆನು ನಾ ನಿನ್ನನು
ಕಳೆಯುವೆ ನಿನ್ನೊಡನೆ ನನ್ನೀ ಉಳಿದ ಬದುಕನ್ನು.

Sunday, August 3, 2008

ಆಸೆ





ನೆಮ್ಮದಿ ಇತ್ತು, ಶಾಂತಿ ಇತ್ತು
ನನ್ನ ಜಗತ್ತಿನಲ್ಲಿ ಲವಲವಿಕೆ ಇತ್ತು
ನಾನೇ ರಾಜನೆಂಬ ಹೆಗ್ಗಳಿಕೆಯೂ ಇತ್ತು.

ಕಂಡೆ ನಾನು ಆ ದೇವಲೋಕದ ಕನ್ಯೆಯನ್ನು
ಆಯಿತು ಅಲ್ಲೋಲ ಕಲ್ಲೋಲ ನನ್ನ ಮನಸಲ್ಲಿ
ಅವಳನ್ನು ಪಡೆಯುವ ಆಸೆ ಹುಟ್ಟಿತು
ಆ ಮರೀಚಿಕೆಯ ದಾರಿ ಹುಡುಕಿ ನಾ ಹೊರಟನು.

ಪ್ರಪಂಚ ಬೇರೆ, ದಾರಿ ಬೇರೆ..!!!!
ಹೇಗೆ ಬೇಟಿ, ಹೇಗೆ ಮಿಲನ...???
ನಾ ಇರುವೆನು ನೀರಿನಲ್ಲಿ, ಅವಳು ಇರುವುದು ದೇವಲೋಕದಲ್ಲಿ.

ಮತ್ತೆ ನೋಡಿದೆ ಅವಳನ್ನು
ಭೇಟಿಯಾಗಲು ನಿರ್ಧರಿಸಿದೆ ಅಂದು
ಬಂದೆ ಹೊರಗೆ ನೀರಿನಿಂದ, ವಿಲ ವಿಲ ಒದ್ದಾಡಿದೆ
ಅವಳು ಸಿಗಲಿಲ್ಲ, ಬದುಕಲು ಆಗುತಿಲ್ಲ.

ಅವಳ ನೆನಪಲ್ಲಿ ಜೀವನ ಸಾಗಿದೆ
ಮುಂದೆ ಎಂತೋ, ಪ್ರಶ್ನೆ ಕಾದಿದೆ
ಯಾರು ತಿಲಿಸುವಿರಿ ನನ್ನ ಈ ವೇದನೆಯನ್ನು
ಬರುವಂತೆ ಮಾಡುವಿರಿ ಅವಳನ್ನು ನನ್ನ ಬಳಿಗೆ...!!!

ಬೇಟಿ ಅನಿರೀಕ್ಷಿತ, ಅಗಲಿಕೆ ಅನಿವಾರ್ಯ, ನೆನಪು ಶಾಶ್ವತ.....

ಮಳೆ ಹನಿ



ಓ ಮಳೆ ಹನಿಯೇ, ಏಕಾಂಗಿಯಾಕಾಗಿರುವೆ
ಎಲ್ಲಿಗೆ ಹೋಗಬೇಕಿದ್ದ ನೀನು ಹೀಗೇಕೆ ನಿಂತಿರುವೆ...!!!

ಏನ ಹೇಳಲಿ ಸೂರ್ಯ, ನನ್ನ ಒಂಟಿತನವನು
ಹೊರಟು ಹೋದರು ಎಲ್ಲರು ನನ್ನನು ಅಗಲಿ
ಬರುವೆವು ಒಟ್ಟಿಗೆ ಹೋಗುವೆವು ಒಟ್ಟಿಗೆ
ಬಾಳಿ ಅಳಿಯುವಾತನಕ ಒಟ್ಟಿಗೆ
ಹೀಗೆಂದುಕೊಂಡು ಮೋಸ ಹೋದೆ.

ಆಕಾಶ ಗಂಗೆ ಇಂದ ಗುಂಪಾಗಿ ಇಳಿದೆವು
ಭೂಸ್ಪರ್ಷಕ್ಕೆ ಕೆಲವರು ಇಂಗಿ ಹೋದರು
ಮತ್ತೆ ಕೆಲವರು ವಾಯುವಿನಲ್ಲಿ ಮೈತ್ರಿಯಾದರು
ಉಳಿದವರು ತಮ್ಮ ಗುರಿಯನ್ನು ಮುಟ್ಟಿದರು

ಅಲ್ಲಿಯೂ ಸಲ್ಲದು ಇಲ್ಲಿಯೂ ಸಲ್ಲದು
ಎಂತಾಗಿದೆ ನನ್ನೀ ಜೀವನ
ಅಳಿಯಲೂ ಆಗದೆ ಬದುಕಲೂ ಆಗದೆ
ಸಾಗುತಿದೆ ಕಾರ್ಪಣ್ಯದ ಜೀವನ

ನನ್ನ ಧ್ಯೇಯವನ್ನು ಮುಟ್ಟುವ ತವಕದಲ್ಲಿ ನಾನು ಹೊರಟನು
ಆದರೆ ಯಾವ ಕಡೆಗೆ ಸಾಗುತಿದೆ ಜೀವನ ನಾ ಅರಿಯೆನು
ಧ್ಯೇಯ ಮೊದಲೋ ಆಸೆ ಮೊದಲೋ ನಾ ತಿಳಿಯೆನು
ಧೈರ್ಯ ತುಂಬಿ ದಾರಿ ತೋರಿ ನೀ ನನ್ನ ನಡಸುವೆಯ...?

ಧ್ಯೇಯ ಇರದ ಪ್ರಾಣಿ ನಾ ಎಲ್ಲೂ ಕಾಣೆನು
ಆಸೆ ಇಂದ ಕೂಡಿದ ಧ್ಯೇಯ ಬದುಕಿನ ಕಾರಣ
ನುಗ್ಗಿ ಮುಂದೆ ಸಾದಿಸು ಧ್ಯೇಯವನ್ನು
ನಾ ಇರುವೆ ನಿನ್ನ ಹಿಂದೆ, ಇದನು ನೀ ಅರಿತುಕೋ...!!!!