Wednesday, November 19, 2008

ಗಾಳಿಪಟ


ಜೀವನ ಒಂದು ಗಾಳಿಪಟ,
ಅವನೇ ಸೂತ್ರಧಾರ .

ಕಷ್ಟ ಸುಖವೆಂಬ ಆಕಾಶ,
ಗಾಳಿಯು ಇಲ್ಲಿ ಆಕಸ್ಮಿಕ,
ಬಾಲಂಗೋಚಿಗೆ ಗುರಿ ಇಲ್ಲ,
ಅವನ ಹಿಡಿತದಲ್ಲಿದೆ ಈ ಬಾಳು...

ಹಾರುವ ಪಟ ನೋಡಲು ಬಲು ಚಂದ,
ಸೂತ್ರ ಮುರಿದ ಪಟಕ್ಕೆ ದಿಕ್ಕೆಲ್ಲಿ,
ಸುಖದ ಜೀವನ ಬಲು ಅಂದ,
ದುಃಖದ ಜೀವನಕೆ ನೆಲೆಯಲ್ಲಿ....

ಅವನ ಆಟಕೆ ನಾನು ಆಡುವೆ,
ತೋರಿದ ದಾರಿಗೆ ನಾನು ನಡೆಯುವೆ,
ಮುಂದೆ ಎಂತೋ ಯಾರು ಅರಿಯರು,
ಪಯಣ ಎಲ್ಲೋ ಯಾರು ತಿಳಿಯರು.....

Tuesday, November 18, 2008

ಚಿಗುರು


ಚಿಗುರು ಬೆಳೆದಿದೆ, ಬಾಳೆಂಬ ಮರದಲಿ,
ಕವಲು ಒಡೆದಿದೆ, ಒಲುಮೆ ಎಂಬ ನದಿಯಲಿ,
ಮನಸ್ಸು ಮುಳುಗಿದೆ, ವಿರಹ ಎಂಬ ಸುಳಿಯಲಿ....

ಈ ಮರಕೆ ಬೇಕು ಬೇರಿನಾಸೆರೆ,
ಈ ಮನಕೆ ಬೇಕು ಒಲವಿನಾಸರೆ,
ಈ ಕಣ್ಣಿಗೆ ಬೇಕು ನಿನ್ನ ಮುಗುಳ್ನಗೆಯಾಸರೆ,
ಈ ಕವಿಗೆ ಬೇಕು ನಿನ್ನ ಸ್ಪೂರ್ತಿಯಾಸರೆ .

ಬಾಳೆಂಬ ಪಥದಲಿ, ಮುಳ್ಳಿದ್ದರೇನು ,
ಪ್ರೇಮ ಯಾತ್ರೆಯಲಿ, ವಿರಹ ಬಂದರೇನು,
ದಾರಿ ಕಾಣುತಿದೆ ನನ್ನ ನಲ್ಲೆಯ ಕಡೆಗೆ,
ಕಾಲ ಸನಿಹವಾಗಿದೆ ಈ ವೇದನೆಗಳ ಅಂತ್ಯಕ್ಕೆ...........

Thursday, November 13, 2008

ನೆನಪು


ಕಣ್ಣ ಮುಂದಿದೆ ಆ ನಿನ್ನ ರೂಪ,
ಕಿವಿಯಲ್ಲಿ ಗುನುಗುತ್ತಿದೆ ಆ ನಿನ್ನ ನಾದ,
ಎದೆಯಲ್ಲಿ ನಲಿಯುತ್ತಿದೆ ಆ ನಿನ್ನ ಪ್ರೇಮ,
ಮತ್ತೆ ಮತ್ತೆ ಕಾಡುತಿದೆ ಆ ನಿನ್ನ ನೆನಪು....

ಚಿಗುರಾಗಿ ಹುಟ್ಟಿದ ಪ್ರೇಮ,
ಬೆಳೆದಿದೆ ಹೆಮ್ಮರವಾಗಿ,
ಮನದಲ್ಲಿ ಆದ ಚಿಲುಮೆ
ಅಪ್ಪಳಿಸಿದೆ ಸುನಾಮಿಯಂತೆ
ಎಂತಹ ಸಂತೋಷ, ಎಂತಹ ನೋವು....

ಎಂದು ಆಗುವುದು ನಿನಗೆ ಪ್ರೇಮ
ಅಂದೇ ನಮ್ಮಿಬರ ಮಿಲನ,
ಎಂದು ಬರುವುದು ಆ ಅಮೃತಘಳಿಗೆ
ಕೂಡಿ ಬಾಳುವೆವು ಮುಂದಿನ ಜೀವನ.....