Monday, October 27, 2008

ಜೀವನ


ಜೀವನ :
ಜೀವನ ಒಂದು ತೂಗುಯ್ಯಾಲೆ
ಹುಟ್ಟು ಸಾವೆಂಬ ಸರಪಳಿಯಲ್ಲಿ.

ಒಮ್ಮೆ ಮೇಲೆ ಒಮ್ಮೆ ಕೆಳಗೆ
ಒಮ್ಮೆ ಸುಖ ಒಮ್ಮೆ ದುಃಖ
ಒಮ್ಮೆ ಗೆಲುವು ಒಮ್ಮೆ ಸೋಲು
ಆದಿ ಅಂತ್ಯಗಳ ನಡುವಿನ ಜೀವನ.

ಆಸೆ - ನಿರಾಸೆ, ಒಲವು - ದ್ವೇಷ,
ಬೇವು - ಬೆಲ್ಲದ ತರಹ ಜೀವನ.

ಉಯ್ಯಾಲೆ ತೂಗುತಿದೆ, ಜೀವನ ಸಾಗುತಿದೆ,
ಕಾಲ ಕಳೆದಂತೆ, ರಭಸವೂ ಬದಲುತ್ತಿದೆ,
ಯಾವ ಕಡೆ ಪಯಣ, ಯಾರು ಬಲ್ಲರು,
ಈ ಜಂಜಾಟಕ್ಕೆ ಮುಕ್ತಿ ಎಂದೋ ಯಾರು ಅರಿಯರು...!!!

Friday, October 17, 2008

ಸ್ಪೂರ್ತಿ




ನನಗೆ ನೀನೆ ಸ್ಪೂರ್ತಿ

ಈ ಪ್ರೇಮಕ್ಕೆ ನೀನೆ ಸ್ಪೂರ್ತಿ,
ಆದರೆ ಈ ವಿರಹಕ್ಕೆ ನೀ ಏಕೆ ಕರಣ....!!!

ಈ ಕವನಕ್ಕೆ ನೀನೆ ಸ್ಪೂರ್ತಿ,
ಆದರೆ ಈ ಗೋಳಿಗೆ ನೀ ಏಕೆ ಕರಣ..!!!

ಈ ಬಾಳಿಗೆ ನೀನೆ ಸ್ಪೂರ್ತಿ,
ಆದರೆ ಈ ವ್ಯಥೆಗೆ ನೀ ಏಕೆ ಕಾರಣ...!!!

ನನ್ನ ಬದುಕಿನ ಸ್ಪೂರ್ತಿಯಾಗು,
ನನ್ನ ಬದುಕನ್ನು ನಂದಿಸಬೇಡ...

Saturday, October 4, 2008

ಮೌನ


ಈ ಮೌನದಲ್ಲೇನಿದೆ, ಇರುವುದೆಲ್ಲ ಬರಿ ಮಾತಿನಲ್ಲಿ
ಈ ವಿರಹದಲ್ಲೇನಿದೆ, ಇರುವುದೆಲ್ಲ ಪ್ರೀತಿಯಲ್ಲಿ.

ಯಾಕಿರುವೆ ಹೀಗೆ, ಮೋಡ ಕವಿದ ಬಾನಿನಂತೆ
ನರಳುತಿರುವೆ ಏಕೆ, ಮಳೆ ಕಾಣದ ಭುವಿಯಂತೆ
ಕಾದಿರುವೆ ಏಕೆ, ಯಾವ ಸಮಯ ಬರುವುದೆಂದು....

ಎದೆಯಲ್ಲಿ ನೋವು, ಮನದಲ್ಲಿ ಕಾತುರ
ತಲೆಯಲ್ಲಿ ಯೋಚನೆ, ದೇಹಕ್ಕೆ ಯಾತನೆ
ಇದು ನೆಮ್ಮದಿ ಕೆಡಿಸಿಹ ಚಿಂತೆಯೋ
ಇಲ್ಲ ಮನಸ್ಸು ಕೊಲ್ಲುತಿಹ ಚಿತೆಯೋ.

ಮೌನ ಬಿಡು ಮಾತನಾಡು,
ಮನಸ್ಸಿನ ಭಾವನೆಗಳ ಹೊರಹಾಕು
ನಲಿ ನಲಿಯುತ,
ಹೊಸ ಜೀವನದ ನಾಂದಿ ಹಾಡು.


ಮಾತೆ ಮುತ್ತು, ಮಾತೆ ಮೃತ್ಯು......