Friday, January 30, 2009

ನನ್ನಲ್ಲಿ ನೀನು


ನಾನು, ನೀನು..? ಈ ಪ್ರಶ್ನೆಗೆ ಉತ್ತರವೇನು...

ನನ್ನ ಕಲ್ಪನೆಯ ಶಿಲೆಯು ನೀನು,
ನನ್ನ ಕಣ್ಣಿನ ದೃಷ್ಟಿಯು ನೀನು,
ನನ್ನ ಮಾತಿನ ಧಾಟಿಯೂ ನೀನು,
ನನ್ನ ಯೋಚನೆಗಳ ಭಂಡಾರ ನೀನು,
ನನ್ನ ಉಸಿರಿನ ತ್ರಾಣ ನೀನು,
ನನ್ನ ಹೃದಯಾಲಯದ ದೇವತೆ ನೀನು,
ನನ್ನ ಬದುಕಿಗೆ ಅರ್ಥ ನೀನು.

ನಾನು ನೀನು ಎಂದೂ ಬೇರೆಯಲ್ಲ,
ನಮ್ಮ ಈ ವಿರಹಕ್ಕೆ ಅರ್ಥವಿಲ್ಲ.
ಬೇರೆಯಂತಿರುವುದು ಈ ದೇಹವು,
ಒಂದೇ ಜೀವದಂತಿರುವುದು ನಮ್ಮ ಮನವು.

ನಾನು.. ನೀನು.. ಉತ್ತರ ಇಲ್ಲಿದೆ...
ನನ್ನ ಮನದಲ್ಲಿ ನೀನು, ನಿನ್ನ ಮನದಲ್ಲಿ ನಾನು..
ಪ್ರಶ್ನೆ ಕಠಿಣ, ಆದರೆ ಉತ್ತರ ಬಲು ಸುಲಭ.

Monday, January 5, 2009

ಹೊಸ ವರ್ಷ


ದಿನಗಳೆಂಬುದು ಪಂಚಾಂಗದಲ್ಲಿ ಬರೆದ ದಿನಗಳಲ್ಲ,
ವರ್ಷವೆಂಬುದು ಕಳೆದ ಹೋದ ಸಂವತ್ಸರವಲ್ಲ,
ಆಸೆಗೆ ತಕ್ಕಂತೆ ಛಲವನ್ನು ತರುವುದೇ ದಿನಗಳು,
ಮಾನವನಿಗೆ ಮೌಲ್ಯಗಳನ್ನು ತುಂಬುವುದೇ ವರ್ಷಗಳು.

ದಿನ ಕಳೆಯಿತು, ಹೊಸತನ ಹರಿಯಿತು,
ಹಳೆಯ - ಹೊಸತನದ ದೊಂಬಿಯಾಯಿತು,
ಹೊಸತು ಸರಿಯೋ, ಹಳತು ಸರಿಯೋ,
ಇದೆರದರ ನಡುವೆ ಮನಸ್ಸಿನಲ್ಲಿ ಕಾಳಗವಾಯಿತು.

ಹಳೆಯ ಅನುಭವ ಬೇಕು,
ಹೊಸ ಸ್ಪರ್ದೆಯೂ ಬೇಕು,
ಹಳೆಯ ಚೈತನ್ಯ ಬೇಕು,
ಹೊಸ ಗುರಿಯು ಬೇಕು.

ನೆನ್ನೆ - ನಾಳೆಗಳ ನಡುವಿನಲಿ,
ಎಳು - ಬೀಳುಗಳ ಜೊತೆಯಲಿ,
ಬೇವು - ಬೆಲ್ಲಗಳ ರುಚಿಯಲಿ,
ನೋವು - ನಲಿವುಗಳ ಮಧ್ಯದಲ್ಲಿ.... ಸಾಗುತಿದೆ ಈ ಜೀವನ.

ಜೀವನ ಸಾಗಲಿ, ಹೊಸತನ ಪಡೆಯಲಿ,
ಎಲ್ಲದಕ್ಕೂ ಮೀರಿ ನೆಮ್ಮದಿಯ ನೆಲೆ ದೊರಕಲಿ...